ಹಬ್ಬ ಎಂದರೆ ದೀಪಾವಳಿ, ದೀಪಾವಳಿ ಎಂದರೆ ಹಬ್ಬ. ಈ ಹಬ್ಬ ಬೆಳಕಿನ ಹೆಬ್ಬಾಗಿಲನ್ನೇ
ತೆರೆಯುತ್ತದೆ. ಅದು ಸುತ್ತಮುತ್ತಲಿನವರಿಗೂ ಬೆಳಕು ಚೆಲ್ಲಬಲ್ಲ ನಮ್ಮ ಜೀವನದ ಬೆಳಕು.
ದೀಪದಿಂದ ದೀಪ ಹಚ್ಚುವುದು, ಪರಸ್ಪರ ಕೈಜೋಡಿಸಿ ಭ್ರಾತೃತ್ವ ಮೆರೆಯುವುದು,
ಅನೇಕತೆಯಲ್ಲಿ ಏಕತೆ ಮೆರೆಯುವುದರ ಸಂಕೇತವೂ ಹೌದು.
ಈ ಶುಭ ಸಂದರ್ಭದಲ್ಲಿ ಬೆಳಕಿನ ಆವಳಿಯ ಹಬ್ಬದ ವಿಶೇಷ ಶುಭ ಆಶಯಗಳ ಸಾಲುಗಳು ಇಲ್ಲಿವೆ:
'ದಿವಾಳಿ' ಶುಭಾಶಯ ಬೇಡ
'ದೀಪಾವಳಿ'ಯ ಶುಭಾಶಯಗಳಿರಲಿ
ದೀಪಾವಳಿ ಶುಭಾ'ಷ'ಯ ಬೇಡ
ಅದು ಶುಭದ 'ಆಶಯ' ಮಾತ್ರವಾಗಿರಲಿ
ಶುಭಾಶಯಗಳು ಹಾ'ರ್ಧಿ'ಕವಾಗುವುದು ಬೇಡ
ಶುಭಾಶಯಗಳು ಹಾ'ರ್ಧಿ'ಕವಾಗುವುದು ಬೇಡ
ಅದು ಹಾ'ರ್ದಿ'ಕವಾಗಿಯೇ ಇರಲಿ
- ಪರಶುರಾಮ ಕಟ್ಟಿಮನಿ
PrintPDF
For Further Reading,
0 comments:
Post a Comment