ಪುಟ್ಟರಾಜ ಗವಾಯಿಗಳ ಜನನ ೧೯೧೪ ಮಾರ್ಚ ೩ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಸಪೇಟೆ ಬಳಿಯ ವೆಂಕಟಾಪುರದಲ್ಲಿ ಆಯಿತು. ತಾಯಿ ಸಿದ್ದಮ್ಮ; ತಂದೆ ರೇವಣಯ್ಯ. ಹುಟ್ಟಿ ಆರು ತಿಂಗಳಾಗುವದರಲ್ಲಿಯೆ, ಮಗುವಿಗೆ ಕಣ್ಣು ಬೇನೆ ಬಂದಿತು. ಹಳ್ಳಿಯ ವೃದ್ಧೆಯೊಬ್ಬಳ ಸಲಹೆಯಂತೆ ಸಿದ್ದಮ್ಮ ಮಗುವಿನ ಕಣ್ಣ ಪೊರೆ ತೆಗೆಯುವ ಸಲುವಾಗಿ ತೊನಸಿಯನ್ನು ಉಪಯೋಗಿಸಿದಳು. ಪರಿಣಾಮವಾಗಿ ಕಣ್ಣಿನ ದೃಷ್ಟಿಯೇ ಪೂರ್ಣವಾಗಿ ನಾಶವಾಗಿ ಹೋಯಿತು.
ಶಿಕ್ಶಣ:
ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು? ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತವಾದ್ಯಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವುಗಲನ್ನೂ ಸಹ ಕಲಿತರು. ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು. ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳಲ್ಲಿ ಅಲ್ಲದೆ, ಪುಟ್ಟರಾಜರು ತಬಲಾ,ಹಾರ್ಮೋನಿಯಮ್,ಪಿಟೀಲು, ಸಾರಂಗಿ, ಶಹನಾಯಿ ಮೊದಲಾದ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣತರಾದರು.
ಸಾಧನೆ:
ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ನಂತರ “ಶ್ರೀ ವೀರೇಶ್ವರ ಪುಣ್ಯಾಶ್ರಮ”ವನ್ನು ಮುನ್ನಡೆಯಿಸಿಕೊಂಡು ಹೋದವರು ಪುಟ್ಟರಾಜ ಗವಾಯಿಗಳು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಪುರಾಣರಚನೆ ಹಾಗು ಸುಮಾರು ೩೫ ನಾಟಕಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಇಂತಿವೆ:
ಸೊಲ್ಲಾಪುರದ ಸಿದ್ದರಾಮೇಶ
ಸತಿ ಸುಕನ್ಯಾ
ರಾಜಶೇಖರ ವಿಳಾಸ
ಶ್ರೀಕೃಷ್ಣ ಗಾರುಡಿಗ
ನವಯುಗದೆಡೆಗೆ
ರತ್ನಹಾರ
ಘೂಷ್ಮಾ
ಸವತಿ ಮತ್ಸರ
ನಲ್ಲೂರು ನಂಬೆಕ್ಕ
ಅಸ್ಪ್ರಷ್ಯೋದ್ಧಾರ
ದೇವರ ದುಡ್ಡು
೧೯೬೯ ನವೆಂಬರ ೧೦ರಂದು “ಪಂಚಾಕ್ಷರವಾಣಿ” ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಪತ್ರಿಕಾಪ್ರಪಂಚಕ್ಕೂ ಸಹ ಪುಟ್ಟರಾಜರು ಕಾಲಿಟ್ಟರು.
ಸನ್ಮಾನ:
ಪುಟ್ಟರಾಜ ಗವಾಯಿಗಳ ಸಾಧನೆ ಹಾಗು ಸಲ್ಲಿಸಿದ ಸೇವೆಗಾಗಿ ಅವರಿಗೆ ಸಂದಿರುವ ಪುರಸ್ಕಾರಗಳು ಅನೇಕ.
೧೯೫೯ರಲ್ಲಿ ಸುತ್ತೂರು ಮಠದಿಂದ “ಸಾಹಿತ್ಯ ಸಂಗೀತ ಕಲಾಪ್ರವೀಣ” ಪ್ರಶಸ್ತಿ
೧೯೬೫ರಲ್ಲಿ ಬನವಾಸಿ ವಿರಕ್ತ ಮಠದಿಂದ “ಸಮಾಜ ಸೇವಾ ಧುರೀಣ” ಪ್ರಶಸ್ತಿ
೧೯೭೦ರಲ್ಲಿ ಶ್ರೀ ಮ.ನಿ.ಪ್ರ. ನೀಲಲೋಚನ ಸ್ವಾಮಿಗಳಿಂದ “ತ್ರಿಭಾಷಾ ಕವಿರತ್ನ ಪ್ರಶಸ್ತಿ”
೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ
೧೯೭೬ರಲ್ಲಿ ಮೂರುಸಾವಿರ ಮಠ, ಹುಬ್ಬಳ್ಳಿ ಇವರಿಂದ “ಸಾಹಿತ್ಯ ಸಂಗೀತ ಕಲಾಚಕ್ರವರ್ತಿ” ಪ್ರಶಸ್ತಿ
೧೯೮೧ರಲ್ಲಿ ಮುರುಘಾಮಠ,ಧಾರವಾಡ ಇವರಿಂದ “ಧರ್ಮಭೂಷಣ” ಪ್ರಶಸ್ತಿ
೧೯೮೯ರಲ್ಲಿ ಶ್ರೀ ಶಾಂತಲಿಂಗೇಶ್ವರ ಸಂಸ್ಥಾನಮಠ, ಆಷ್ಟಗಿ ಇವರಿಂದ “ಕಲಾಜನಕ” ಪ್ರಶಸ್ತಿ
For Further Reading,
0 comments:
Post a Comment