NFPE JCA FNPO ಅಂಚೆ ನೌಕರರ ಸಂಘಗಳ ಜಂಟಿ ಕ್ರಿಯಾ ಸಮಿತಿ, ಹಾವೇರಿ ವಿಭಾಗ, ಹಾವೇರಿ
ಆತ್ಮೀಯ ಕಾರ್ಮಿಕ ಬಂಧುಗಳೇ, 150ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಅಂಚೆ ಇಲಾಖೆಯನ್ನು ಹಾಳುಗೆಡವಿ ಖಾಸಗಿಯವರ ತೆಕ್ಕೆಗೆ ಹಾಕಲು 'ಮೆಕೆನ್ಸಿ' ಹೆಸರಿನ ಭಸ್ಮಾಸುರ ಕಂಪನಿಯನ್ನು ನೇಮಕ ಮಾಡಿಕೊಂಡು ಹಂತ ಹಂತವಾಗಿ ಸಂಪೂರ್ಣ ಇಲಾಖೆಯನ್ನೇ ಮುಚ್ಚುವ ವ್ಯವಸ್ಥಿತ ಹುನ್ನಾರ ನಡೆದಿದೆ. ಇಲಾಖಾ ಸಿಬ್ಬಂದಿಯನ್ನು ಕಡಿತಗೊಳಿಸುವದು, ಹುದ್ದೆಗಳನ್ನು ರದ್ದುಗೊಳಿಸುವದು, ಇರುವ ಸಿಬ್ಬಂದಿಯ ಮೇಲೆ ಅನವಶ್ಯಕ ಮಾನಸಿಕ ದೌರ್ಜನ್ಯ ನಡೆಸಿ ಸಾರ್ವಜನಿಕ ಸೇವೆಯನ್ನು ಶಿಥಿಲಗೊಳಿಸಿ ಖಾಸಗಿಯವರಿಗೆ ವರ್ಗಾಯಿಸುವದು, GDS ನೌಕರರನ್ನು ಮನುಷ್ಯರೇ ಅಲ್ಲವೆಂಬಂತೆ ಶೋಷಿಸುವದು... ಇದೆಲ್ಲವನ್ನೂ ಪ್ರಶ್ನಿಸಿ ಈ ನೀತಿಯ ವಿರುದ್ಧ ನಮ್ಮ ಮುಷ್ಕರ. ಸಾರ್ವಜನಿಕ ಸೇವೆಯನ್ನೇ ದೈವವೆಂದೆ ನಂಬಿಕೊಂಡಿರುವ ಈ ಇಲಾಖೆಯನ್ನು ಸಾರ್ವಜನಿಕರಿಂದಲೇ ದೂರಗೊಳಿಸಿ ಖಾಸಗಿ ಕಂಪನಿಗಳನ್ನು ಇಡೀ ದೇಶದ ಮೇಲೆ ಹೆರುವ ವ್ಯವಸ್ಥಿತ ಸಂಚಿನ ವಿರುದ್ಧ ಈ ಮುಷ್ಕರ.
ಬೇಡಿಕೆಗಳು 1. RMS , ಅಂಚೆ ಕಛೇರಿಗಳು ಮತ್ತು ಬ್ರ್ಯಾಂಚ್ ಆಫೀಸ್ ಗಳ ಮುಚ್ಚುವಿಕೆಯನ್ನು ನಿಲ್ಲಿಸಿ, 'ಮೆಕೆನ್ಸಿ'ಯನ್ನು ಈ ಕೂಡಲೇ ಹಿಂದಕ್ಕೆ ಕಳುಹಿಸಿ. 2. ಖಾಲಿ ಇರುವ ಎಲ್ಲ ಹಂತದ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಿ. 3. ಸ್ಪೀಡ್ ಪೋಸ್ಟ್ ಹಬ್ ಗಳನ್ನೂ ತತ್ಕ್ಷಣವೇ ಮುಚ್ಚಿ ಈ ಹಿಂದಿನ ವಿತರಣ ನೀತಿಯನ್ನೇ ಮುಂದುವರೆಸಿ. 4. Sorting Postman ಹುದ್ದೆ ರದ್ದುಗೊಳಿಸುವ ನಿರ್ಧಾರ ವಾಪಾಸ್ ತೆಗೆದುಕೊಳ್ಳಿ. 5. GDS ನೌಕರರಿಗೆ ಸೇವಾ ವಿಷಯ, ಭಡ್ತಿ, ವೇತನ ಶ್ರೇಣಿ, ರಜೆ, ಪಿಂಚಣಿ, ಬೋನಸ್ ಮತ್ತಿತರೇ ವಿಚಾರಗಳಲ್ಲಿ ಕೇಂದ್ರ ಸರಕಾರಿ ನೌಕರರ ಸ್ಥಾನಮಾನ ನೀಡಿ. 6. Contingent ಮತ್ತು Casual ನೌಕರರ ವೇತನವನ್ನು ೦೧.೦೧.೨೦೦೬ ರಿಂದಲೇ Supreme Court ಆದೇಶದನ್ವಯ ಕನಿಷ್ಠ ವೇತನವನ್ನು ಪುನರ್ವಿಮರ್ಶಿಸಿ. 7. OTA ಮತ್ತು OSA ದರಗಳನ್ನು ಈ ಕೂಡಲೇ ಪುನರ್ವಿಮರ್ಶಿಸಿ. 8. Cadre Restructuring ಈ ಕೂಡಲೇ ಪೂರ್ಣಗೊಳಿಸಿ. 9. System Administrator ಗಳನ್ನು ಭಡ್ತಿ Cadre ಅನ್ನಾಗಿ ಮಾರ್ಪಡಿಸಿ. 10. Postman ನೌಕರರಿಗೆ ಬೀಟ್ ಜೋಡಣೆ, ೧೦೦% ವಿತರಣೆಯಂತಹ ಅಮಾನವೀಯ ಅವೈಜ್ಞಾನಿಕ ಕ್ರಮ ಕೈ ಬಿಡಿ. 11. MTS ನೌಕರರ ನೇಮಕಾತಿ ನಿಯಮಗಳನ್ನು ಪುನರ್ ಪರಿಶೀಲಿಸಿ. 12. SBCO ನೌಕರರನ್ನು Divisional Cadre ಅಂತ ಈ ಕೂಡಲೇ ಘೋಷಿಸಿ. 13. 'Contributory Negligence ' ಎಂಬ ಹಣೆಪಟ್ಟಿಯೊಂದಿಗೆ ನಿರಪರಾಧಿ ನೌಕರರ ಶೋಷಣೆಯನ್ನು ನಿಲ್ಲಿಸಿ. 14. PO ಮತ್ತು RMS Accounts Cadre ನ ಮೇಲಿನ ಪಕ್ಷಪಾತಿ ನೀತಿಯನ್ನು ಕೈ ಬಿಡಿ ಮತ್ತು ಈ ಹುದ್ದೆಯನ್ನು ಪ್ರತ್ಯೇಕ cadre ಅನ್ನಾಗಿ ಪರಿವರ್ತಿಸಿ. 15. ಎಲ್ಲ cadre ಗಳಲ್ಲಿ LR ಗಳ ಮಿತಿಯನ್ನು 20%ಗೆ ಏರಿಸಿ ಮತ್ತು ಈ ಕೂಡಲೇ ಎಲ್ಲ ಹುದ್ದೆಗಳನ್ನು ಭರ್ತಿಮಾಡಿ. 16. ಮಹಿಳಾ ಉದ್ಯೋಗಿಗಳಿಗೆ Child Care Leave ಪ್ರಾಮಾಣಿಕವಾಗಿ ನೀಡಿ ಮತ್ತು ರಜೆ ವಿಚಾರಗಳಲ್ಲಿ ಅನಗತ್ಯ ಕಿರುಕುಳ ನಿಲ್ಲಿಸಿ. 17. MACP ಜಾರಿಯಲ್ಲಿನ ವೇತನ ತಾರತಮ್ಯವನ್ನು ಸರಿಪಡಿಸಿ. 18. ರಜಾ ದಿನ ಮತ್ತು ಭಾನುವಾರಗಳಂದು ತರಬೇತಿ ಮತ್ತು ಮೇಳ ನೆಪದಲ್ಲಿ ನೌಕರರ ಹಕ್ಕಿನ ವಿಶ್ರಾಂತಿಯನ್ನು ನುಂಗುತ್ತಿರುವ ಅನಿಷ್ಟ ಪದ್ಧತಿಯನ್ನು ಈ ಕೂಡಲೇ ನಿಲ್ಲಿಸಿ. 19. ಅಂಚೆ ಇಲಾಖೆಯ ಖಾಸಗೀಕರಣ, ಹೊರಗುತ್ತಿಗೆ ಒಪ್ಪಂದಗಳನ್ನು ರದ್ದು ಮಾಡಿ ಸಾರ್ವಜನಿಕರನ್ನು ಖಾಸಗಿಯವರ ಕಬಂಧ ಬಾಹುಗಳಿಂದ ರಕ್ಷಿಸಿ. ಹೋರಾಟದ ಆಶ್ರಯದೊಂದಿಗೆ,
|
For Further Reading,
0 comments:
Post a Comment