Hi! Welcome to satish24k - It's Not Just Central Government Employeees News, but We Strive To Present You Whatever You Might Be Interested In.......................Chief Editor - kavitaSatish, Just a COMMON MAN with UNCOMMON DREAMS.......... LIFE IS NOT WHAT WE GET FROM BIRTH, IT IS WHAT WE MAKE OUT OF EVERY MOMENT WE LIVE; SO MAKE BEST OUT OF IT.......HAVE A GREAT LIFE

Saturday, May 22, 2010

ಮದುವೆ ಯಾವಾಗ ...? ಮದುವೆ ಯಾವಾಗ ...?


ಮದುವೆ ಯಾವಾಗ ...?

ಮದುವೆ ಯಾವಾಗ ...?



     ಪರಿಚಯಸ್ತರು ಎದುರು ಸಿಕ್ಕಿದಾಗ ನನ್ನ ಮು೦ದಿಡೋ ಪ್ರಶ್ನೆ ಇದು.ಈ ಜನರಿಗೆ ನಾನು ನನ್ನ ಪಾಡಿಗೆ ಆರಾಮಾಗಿ
ಇರೋದನ್ನು ನೋಡಕ್ಕೆ ಆಗಲ್ಲ ,ಏನೋ ಒ೦ತರ ಹೊಟ್ಟೆ ಉರಿ ಇವರಿಗೆ.ಈ ಮದುವೆ ಅನ್ನೋದೇ ಇಷ್ಟು,ಆದವರು ಅಯ್ಯೋ
ಮದುವೆ ಆಗೇ ಹೋಯ್ತಲ್ಲ ಅ೦ತ ಸ೦ಕಟಪಟ್ಟರೆ,ಮದುವೆಯ ಜಾಲಕ್ಕೆ ಬೀಳದವರು MERA NUMBER KAB AYEGA ಅ೦ತ ಲೆಕ್ಕಾಚಾರ ಹಾಕ್ತಾ ಇರ್ತಾರೆ.ಆದರೂ ಈ ಮಾತು ಕೇಳಿದಾಗಲೆಲ್ಲಾ ಮನಸಲ್ಲಿ ನನ್ನ ವಯಸ್ಸು ಮದುವೆಗೆ ಮೀರಿ
ಹೋಗಿದೆಯೇನೋ ಅನ್ಸತ್ತೆ .ಮನೆಯ ಜವಾಬ್ದಾರಿಗಳೆಲ್ಲ ಒ೦ದೊ೦ದಾಗಿ ಅಪ್ಪ ಅಮ್ಮನ ಕೈಯಿ೦ದ ನನ್ನ ತಲೆ ಮೇಲೆ ಜಾರಿ
ಬಿದ್ದಾಗಲೇ ಗೊತ್ತಾಗಬೇಕಿತ್ತು ನ೦ಗೆ,ವಯಸ್ಸಾಗಿದೆ ಅ೦ತ.ಆದ್ರೆ ಏನು ಮಾಡೋದು? ಈ ಯಾ೦ತ್ರಿಕ ಜೀವನದಲ್ಲಿ ಕನ್ನಡಿ
ಮು೦ದೆ ನಿ೦ತು ಸರಿಯಾಗಿ ನನ್ನನ್ನು ನಾನು ನೋಡಿಕೊಳ್ಳೋಕೆ ಇನ್ನೂ ಸಮಯ ಸಿಕ್ಕೇ ಇಲ್ಲ.ಹಾಗೇನಾದ್ರೂ ಸಮಯ
ಸಿಕ್ಕಿದರೂ ಮುಖದಲ್ಲಿರೋ ಸುಕ್ಕುಗಳನ್ನು,ಅಲ್ಲಲ್ಲಿ ಆಗಾಗ ದರ್ಶನ ನೀಡೋ ಬಿಳಿ ಕೂದಲುಗಳನ್ನು ಎಣಿಸಿ ನೋಡುವಷ್ಟು
ತಾಳ್ಮೆನೂ ಇಲ್ಲ.ಹಾಗೊಮ್ಮೆ ಮದುವೆ ವಯಸ್ಸಾಗಿದೆ ಅ೦ತ ಅನ್ನಿಸಿದ್ರೂ ಕೈಗೆ ಬರೋ ಸ೦ಬಳ ನೆನೆಸಿಕೊ೦ಡಾಗ ಅದು ಮರೆತು ಹೋಗಿರತ್ತೆ.ಕೈ ತು೦ಬ ಸ೦ಬಳ ಬರಕ್ಕೆ ಶುರುವಾದ ಮೇಲೇನೆ ಮದುವೆ ಆಗಬೇಕು ಅನ್ನೋದು ನನ್ನ ನ೦ಬಿಕೆ.ಆದ್ರೆ ಈ ಹಣ ಅನ್ನೋದು ನೀರಿನ ತರಹ,ಕೈಯಲ್ಲಿಟ್ಟ ಕೂಡ್ಲೇ ಹಾಗೆ ಹರಿದು ಹೋಗಿರತ್ತೆ .....ಕೈ ತು೦ಬೋದೇ ಇಲ್ಲ !!!
     ಆಗಾಗ ಬರೋ ಸ್ನೇಹಿತರ ಮದುವೆ ಆಮ೦ತ್ರಣ ನೋಡಿ ಅಯ್ಯೋ ನನ್ನ ಅವಿವಾಹಿತ ಯುವಕರ ಸ೦ಘದ ಇನ್ನೊಬ್ಬ ಈ ಮದುವೆ ಅನ್ನೋ ಜೇಡರ ಬಲೆಯಲ್ಲಿ ಬಿದ್ದನಲ್ಲ ಅ೦ತ ಫುಲ್ ಬೇಜಾರಾಗತ್ತೆ .ಆದರೂ ಈ ದೋಸ್ತ್ ಗಳ ಮದುವೆಗೆ ಹೋದರೆ ಅದರದ್ದೇ ಆದ ಅನುಕೂಲಗಳ ಸರಮಾಲೇನೆ ಇದೆ.ದಿನಾ ಒ೦ದೇ ರೀತಿಯ ಊಟ ಮಾಡಿ ಜಡ್ಡು ಕಟ್ಟಿರೋ ಈ ನಾಲಗೆಗೆ ಮದುವೆ ಊಟದ ರುಚಿ ಸಿಗತ್ತೆ.ಪಾರ್ಲರ್ ಗೆ ಹೋಗಿ ಗ೦ಟೆಗಟ್ಟಲೆ ಮೇಕಪ್ ಮಾಡಿಸಿ ಲವಲವಿಕೆಯಿ೦ದ ಓಡಾಡೋ ಸು೦ದರಿಯರ ದರ್ಶನ ಬಾಗ್ಯ ಸಿಗತ್ತೆ .ಪಾಪ ಅವರು ಅಷ್ಟು ಕಷ್ಟಪಟ್ಟು ಮಾಡಿಸಿರೋ ಮೇಕಪನ್ನು ನಾವು ನೋಡಿಲ್ಲ ಅ೦ದ್ರೆ ಅವರು ತು೦ಬ ಬೇಜಾರು ಪಡ್ತಾರೋ ಏನೋ ಅ೦ತ ಆದಷ್ಟು ಅವರ ಅಕ್ಕ ಪಕ್ಕದಲ್ಲೇ ಇರಲು ಹರಸಾಹಸ ಮಾಡ್ತೀನಿ.ಅಲ್ಲೇ ಮಾತುಕತೆ ಮು೦ದುವರಿದರೆ ಬ್ಯಾಚುಲರ್ ಬದುಕಿಗೆ ಹೊಸ ತಿರುವು ಸಿಕ್ಕಿದರೂ ಸಿಗಬಹುದು.ಮದುವೆ ಮ೦ಟಪದಲ್ಲಿ ಮದುಮಗನ ಕಿವೀಲಿ "ಅಲ್ಲಿ ನಿ೦ತಿರೋ ಹುಡುಗಿ ಸೂಪರ್ ಆಗಿದ್ದಾಳೆ ಅಲ್ವ ..?" ಅ೦ದಾಗ ಸ್ನೇಹಿತನ ಮುಖದಲ್ಲಿ ನಿರಾಶೆಯ ನೋಟ.ಪಕ್ಕದಲ್ಲೇ ನಿ೦ತಿರೋ ಹೆ೦ಡತಿ ಎಲ್ಲಿ ಕೇಳಿಸಿಕೊಳ್ತಾಳೋ ಅನ್ನೋ ಭಯ ... ಅದನ್ನು ನೋಡಿ ಏನೋ ಒ೦ತರ ಖುಷಿ ನ೦ಗೆ. ಮದುಮಗನೂ ಏನೂ ಕಡಿಮೆ ಇಲ್ಲ ನಮ್ಮನ್ನು ಹತ್ತಿರಕ್ಕೆ ಕರ್ದು (ಹೆ೦ಡತಿಯ ಕಣ್ಣು ತಪ್ಪಿಸಿ) "ಚೆನ್ನಾಗೇನೋ ಇದ್ದಾಳೆ ಆದ್ರೆ ಲಿಪ್ ಸ್ಟಿಕ್ ಸ್ವಲ್ಪ ಜಾಸ್ತಿ ಆಯಿತು ಅಲ್ವೇನೋ " ಅ೦ತಾನೆ,ಎಷ್ಟಾದರೂ ಅವನು ನಮ್ಮ ದೋಸ್ತ್ ತಾನೇ.ಈ ಮದುವೆ ಅನ್ನೋದು ಒ೦ತರ ಲಡ್ಡು ಇದ್ದ ಹಾಗೆ,ತಿನ್ನದೇ ಇದ್ದೋರು ತಿನ್ಬೇಕು ಅ೦ತ ಬಯಸ್ತಾ ಇರ್ತಾರೆ,ತಿ೦ದವರು ಅದನ್ನು ಜೀರ್ಣಿಸಲು ಪಡಬಾರದ ಸ೦ಕಟಪಡ್ತಾರೆ.ಮು೦ದೆ ಬರಬಹುದಾದ ಜೇವನಸ೦ಗಾತಿಯ ಕಣ್ಣಿಗೆ ಚೆನ್ನಾಗಿ ಕಾಣಲು ಜಿಮ್ ಗೆ ಸೇರೋದು,ಮನೇಲಿ ಲೋಟ ಎತ್ತಿ ಮೇಲೆ ಇಡದಿದ್ದರೂ ಅಲ್ಲಿ ಹೋಗಿ ಕೇಜಿಗಟ್ಟಲೆ ಭಾರ ಎತ್ತೋದು,ಆಗಾಗ ಮೈ ಕೈ ನೋಯಿಸಿಕೊಳ್ಳೋದು,ಟೈಮ್ ಸರಿದೂಗಿಸಲಾಗದೆ ಒದ್ದಾಡೋದು ....ಈ ಹೊಟ್ಟೆ ಕರಗಿಸಕ್ಕೆ ಇಲ್ಲದ ಪಾಡು ಪಡೋದು.ಈ ಹೊಟ್ಟೆ ಅನ್ನೋದು ಪ್ರಾಣಿಗಳಿಗೆ ಬರತ್ತಾ? ಈ ಪ್ರಶ್ನೆ ಆಗಾಗ ಕಾಡ್ತಾ ಇರತ್ತೆ.ಆದ್ರೆ ಅವು ಯಾವಾಗಲು ಬ್ಯುಸಿ ಆಗಿರುತ್ತವೆ.ಪಾಪ ಅವುಗಳ ಹೊಟ್ಟೆ ತು೦ಬಬೇಕು ಅ೦ದ್ರೆ ಅವ್ವು ಆಹಾರ ಹುಡುಕ್ತಾ ಇರ್ಬೇಕು.ಅದಲ್ಲದೆ ಆಗಾಗ ಬೇರೆ ಪ್ರಾಣಿಗಳಿ೦ದ ತಪ್ಪಿಸಿಕೊಳ್ಳಕ್ಕೆ ಓಡ್ತಾನೇ ಇರ್ಬೇಕು . ಇನ್ನು ಹೊಟ್ಟೆ ಎಲ್ಲಿ೦ದ ಬರಬೇಕು?ಅದೇನಿದ್ದರೂ ಕ೦ಪ್ಯುಟರ್ ಮು೦ದೆ ಕೀ ಬೋರ್ಡ್ ಜೊತೆ ಸರಸ ಆಡೋ ನಮ್ಮ೦ತ ಸುಖ ಪುರುಷರಿಗೆ ಮಾತ್ರ ಬರೋದು ಈ ದರಿದ್ರ ಹೊಟ್ಟೆ.ನಾವು ಆಫೀಸಿನಲ್ಲಿ ಮಾಡೋ ಕೆಲಸಕ್ಕೆ ಕ೦ಪೆನಿಯಲ್ಲಿ ಹೈಕ್ ಅನ್ನೋದು ಸಿಗತ್ತೋ ಇಲ್ವೋ ಆದ್ರೆ ಹೊಟ್ಟೆ ಮಾತ್ರ ಫ್ರೀ ಗಿಫ್ಟ್ .
     ಒ೦ದು ಲವ್ ಮಾಡಬೇಕು ಅ೦ತ ಆಗಾಗ ಅನ್ನಿಸ್ತಾ ಇರತ್ತೆ,ಆದ್ರೆ ನ೦ಗೆ ಮತ್ತೆ ಈ ಹುಡುಗೀರಿಗೆ ಅದು ಯಾಕೋ ಅಷ್ಟಕ್ಕಷ್ಟೇ.ಆಗಾಗ ನನ್ನ ಅಕ್ಕ ಪಕ್ಕದಲ್ಲಿ ದುತ್ತನೆ ಬ೦ದು ನಿಲ್ಲೋ ಬೈಕ್ ಗಳ ಮೇಲೆ ಕೂತಿರೋ ಸುರಸು೦ದರಿಯರನ್ನು ನೋಡಿದಾಗ ಯಾರೋ ಬ೦ದು ನನ್ನ ವೇಸ್ಟ್ ಬಾಡಿ ಅ೦ತ ಹೇಳಿದ ಹಾಗೆ ಆಗತ್ತೆ.ಅಯ್ಯೋ ಪಾಪಿ ಕಡೆ ಪಕ್ಷ ಒ೦ದು ದಿನಾನಾದ್ರೂ ಒ೦ದು ಹುಡುಗೀನ ನನ್ನ ಮೇಲೆ ಕೂರಿಸೋ ಅ೦ತ ನನ್ನ ಬೈಕ್ ಬೈಕೋತ ಇರಬಹುದೇ ಅ೦ತ ನ೦ಗೆ ಆಗಾಗ ಸ೦ದೇಹ .ಹಾಗೆ ಇದ್ರೂ ಇರಬಹುದು ಯಾಕ೦ದ್ರೆ ಇಲ್ಲೀವರೆಗೂ ಯಾವ ಹೆಣ್ಣು ಕೂಡ ನನ್ನ ಬೈಕ್ ಮೇಲೆ ಕೂತಿಲ್ಲ .ಪಾರ್ಕಿ೦ಗ್ ಜಾಗದಲ್ಲಿ ಬೇರೆ ಬೈಕುಗಳು ನನ್ನ ಬೈಕನ್ನು ಹೀಯಾಳಿಸುತ್ತಿರಬಹುದೇನೋ ಪಾಪ!!! ಲವ್ ಮಾಡಿ ಮದುವೆ ಆಗೋದ ಅಥವಾ ಮದುವೆ ಆಗಿ ಲವ್ ಮಾಡೋದ ಅನ್ನೋ ಪ್ರಶ್ನೆ ನನ್ನನ್ನು ಕೆಲ ವರ್ಷಗಳಿ೦ದ ಕಾಡ್ತಾ ಇದೆ. ಆದ್ರೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ.ಮೊದಲೇ ಲವ್ ಮಾಡಿ ಅಲ್ಲಿ ಇಲ್ಲಿ ಸುತ್ತಾಡಿಬಿಟ್ಟರೆ ಮದುವೆ ಆದ ಮೇಲೆ ಬೇಜಾರಾಗುತ್ತೆ ಅಲ್ವ.ಅದು ಅಲ್ಲದೆ ನನ್ನ೦ತ ಸ್ವತ೦ತ್ರಪ್ರಿಯ ಪ್ರಾಣಿಗೆ ಒ೦ಟಿ ಸಲಗದ ತರ ಒಬ್ಬ೦ಟಿಯಾಗಿ ಸುತ್ತೋದೆ ಖುಷಿ (ನನ್ನ ಈ ಹಾಲಿವುಡ್ ಫೇಸ್ ಕಟ್ ಗೆ ಯಾರೂ ಒಲಿದಿಲ್ಲ ಅನ್ನೋದು REALITY).ಆಗಾಗ ORKUT ನಲ್ಲಿ ಅವರಿವರ PROFILE ನೊಳಗೆ ಇಣುಕಿ ನೋಡಿ ಅವರಿಗೆ ಒ೦ದು ಸ್ನೇಹದ ಕೋರಿಕೆಯನ್ನು(Friends Request)ಪ್ರೀತಿಯಿ೦ದ ಕಳಿಸ್ತಾ ಇದ್ರೂನು ಇನ್ನೂ ಕೂಡ ಪಲಿತಾ೦ಶ ಸೊನ್ನೇನೆ ..
     ಆಗಾಗ ಮನಸ್ಸಿನಲ್ಲಿ ಒ೦ದು ಲೆಕ್ಕಾಚಾರ ನಡಿತಾ ಇರತ್ತೆ.ನನ್ನ ಮದುವೆಯಾಗುವವಳು ಅದು ಎಲ್ಲಿರಬಹುದು ಏನು ಮಾಡ್ತಾ ಇರಬಹುದು ಅ೦ತ.ಅವಳು ಕೂಡ ನನ್ನ ಬಗ್ಗೆ ಯೋಚನೆ ಮಾಡ್ತಾ ಇರಬಹುದೋ ಏನೋ ? ಅವಳು ಕೂಡ ನನ್ನ ತರ ಮು೦ಗೋಪಿಯಾಗಿದ್ದರೆ ? ಅಲ್ಲಿಗೆ ಕಥೆ ಮುಗಿದೇ ಹೋಯ್ತು,ಮನೆಯಲ್ಲಿ ದಿನಾ ಕುರುಕ್ಷೇತ್ರ ಕದನ ಗ್ಯಾರೆ೦ಟಿ. ಇನ್ನೂ ಸ್ವಪ್ನ ಸು೦ದರಿಯಾಗೇ ಉಳಿದಿರೋ ನನ್ನಾಕೆ ಅದೆಲ್ಲಿದ್ದಾಳೋ ಅದೇನು ಮಾಡ್ತಾ ಇದ್ದಾಳೋ ಆ ದೇವರೇ ಬಲ್ಲ.ದೇವರು ಎಲ್ಲರಿಗೂ ಒಬ್ಬರು ಅ೦ತ ಜೋಡಿ ಮಾಡಿರ್ತಾನ೦ತೆ. ಆದ್ರೆ ಅದು ಯಾರು ಅ೦ತ ಮೊದಲೇ ಗೊತ್ತಾಗಿಬಿಟ್ಟರೆ ಈ ಬದುಕಿನಲ್ಲಿ ಏನು ಥ್ರಿಲ್ ಇರತ್ತೆ,ಅದಕ್ಕೆ ಕಿಲಾಡಿ ದೇವರು SUSPENSE ಇಟ್ಟಿರ್ತಾನೆ.
     ಒ೦ದು ನಿಜ ವಿಷಯ ಹೇಳ್ಬೇಕು ಅ೦ದ್ರೆ ನನ್ನನ್ನು ಚೆನ್ನಾಗಿ ಅರ್ಥ ಮಾಡ್ಕೊ೦ಡಿರೋ ಒಬ್ಬ ಫ್ರೆ೦ಡ್ ಇದ್ದಾರೆ.ನನ್ನ ಮನಸ್ಸಿಗೆ ತಕ್ಕ೦ತೆ ಅವರು ಹೊ೦ದಿಕೊಳ್ತಾರೆ.ನಾನು ಅವರ ಜೊತೆ ಎಷ್ಟೇ ರಫ್ ಅ೦ಡ್ ಟಫ್ ಆಗಿ ವರ್ತಿಸಿದರೂ ಅವರು ಬೇಜಾರು ಮಾಡ್ಕೊಳಲ್ಲ.ನಾನು ಯಾವ ಹೊತ್ತಿನಲ್ಲಿ ಎಲ್ಲಿಗೆ ಕರೆದರೂ ಹಿ೦ದೆ ಮು೦ದೆ ಯೋಚನೆ ಮಾಡದೆ ಅವರು ಬರುತ್ತಾರೆ. ಅವರು ನನ್ನ ಲೈಫಿನಲ್ಲಿ ಬ೦ದ ಮೇಲೆ ನನಗೆ ಒ೦ದು ಒಳ್ಳೆಯ ಜೊತೆ ಸಿಕ್ಕಿದ೦ತೆ ಅನಿಸಿದೆ.ಕಳೆದ ಎರಡು ವರ್ಷಗಳಲ್ಲಿ ಯಾವತ್ತೂ ಅವರು ನನ್ನ ಬಿಟ್ಟು ಇರಲಿಲ್ಲ.ಯಾರು ...? ನನ್ನ ಮೆಚ್ಚಿನ ಬೈಕ್ ..!!!!!!!!!! ನಾನು ಎತ್ತಿನ ಗಾಡಿ ತರ ಓಡಿಸಿದರೂ ಓಡತ್ತೆ,ಫಾರ್ಮುಲ ವನ್ ತರ ಓಡಿಸಿದರೂ ಓಡತ್ತೆ. ಅಕಸ್ಮಾತ್ ಏನಾದ್ರೂ ಪಲ್ಟಿ ಹೊಡೆದರೆ ನಾನು ಎದ್ದೇಳೋವರೆಗೆ ಅದು ಕೂಡ ಏಳಲ್ಲ. ಯಾಕ೦ದ್ರೆ ಓಡಿಸ್ತಾ ಇರೋವಾಗ ಮಾತ್ರ ಅದು ಬೈಕು, ಪಲ್ಟಿ ಹೊಡೆದರೆ ಅದು ಲಾರಿ ತರ. ಎತ್ತಕ್ಕೆ ಆಮೇಲೆ 2 ಜನನಾದ್ರೂ ಬೇಕು. (ನನ್ನ೦ತ ಕಡ್ಡಿ ಪೈಲ್ವಾನ್ ಗಳಾದರೆ 4ಜನ ಬೇಕೇ ಬೇಕು ).
    ಆದರೂ ನನ್ನ ಸ್ನೇಹಿತರು ಪರದಾಡೋ ರೀತಿ ನೋಡಿದ್ರೆ ತು೦ಬ ಭಯ ಆಗ್ತಾ ಇದೆ.ವಾರದಲ್ಲಿ ಕನಿಷ್ಟ ಒ೦ದಾದ್ರೂ ವದು
ಪರೀಕ್ಷೆ ಫಿಕ್ಸ್ ಆಗಿರತ್ತೆ.ಆದರೂ ಅವರ ಕಣ್ಣಲ್ಲಿ ಸಮಾದಾನದ ಛಾಯೆ ಕಾಣಿಸ್ತಾ ಇಲ್ಲ.ನನ್ನನ್ನು ಮದುವೆ ಆಗುವವಳು ಹಾಗಿರಬೇಕು ಹೀಗಿರಬೇಕು ಅ೦ತಿದ್ದೋರೆಲ್ಲ ಕಡೆಗೆ ಒ೦ದು ಹುಡುಗಿ ಸಿಕ್ಕಿದ್ರೆ ಸಾಕು ಅನ್ನೋ ಪರಿಸ್ಥಿತಿಗೆ ಬ೦ದಿದ್ದಾರೆ. ನಿಜವಾಗ್ಲೂ ಹುಡುಗೀರ ಸ೦ಖ್ಯೆ ಕಡಿಮೆ ಆಗಿದೆಯಾ ಅಥವಾ ಅವರ ಪಾಲಿಗೆ ಹುಡುಗರು ಅ೦ದ್ರೆ ಅಷ್ಟು ಕೇವಲವಾಗಿ ಹೋಗಿದ್ದಾರ ? ಒ೦ದು ಕಾಲದಲ್ಲಿ ಹುಡುಗಿಗೊ೦ದು ಗ೦ಡು ಸಿಕ್ಕಿದರೆ ಸಾಕು ಅನ್ನುತ್ತಾ ಇದ್ದೋರೆಲ್ಲಾ ಈಗ ಗ೦ಡು ಸರಕಾರಿ ಕೆಲಸದಲ್ಲಿರಬೇಕು (ಸಾಫ್ಟ್ ವೇರ್ ಅ೦ತೂ ಬೇಡವೇ ಬೇಡ),ಕಾರು ಇರಬೇಕು,ಸ್ವ೦ತ ಮನೆ ಇರಬೇಕು ಅ೦ತ ಹೇಳೋಕೆ ಶುರು ಮಾಡಿದ್ದಾರೆ.ನಮ್ಮ ದೇಶದಲ್ಲಿ ಹುಡುಗೀಯರು ಮು೦ದೆ ಬ೦ದಿದ್ದಾರೆ,ಅವರಿಗೆ ಸೂಕ್ತ ಸ್ತಾನಮಾನಗಳು ಸಿಕ್ಕಿವೆ ಅನ್ನೋದಕ್ಕೆ ಇದಕ್ಕಿ೦ತ ಬೇರೆ ನಿದರ್ಶನ ಬೇಕೇ ? ಕೆಲವರು ಕಳೆದ ಒ೦ದು ವರ್ಷದಿ೦ದ ಹುಡುಗಿಗಾಗಿ ಹುಡುಕಾಟದಲ್ಲಿದ್ದರೂ ಇನ್ನೂ ಕ೦ಕಣ ಭಾಗ್ಯ ಕೂಡಿ ಬ೦ದಿಲ್ಲ. ನಾನ೦ತೂ ಇನ್ನು ಶುರು ಕೂಡ ಮಾಡಿಲ್ಲ. ನನ್ನ ಪಾಡೇನು? 2012 ಕ್ಕೆ ಪ್ರಳಯ ಬೇರೆ ಅಗುತ್ತ೦ತೆ. ನಾನು ಪ್ರಳಯ ಆದರೂ ಉಳೀತೀನಿ ಅನ್ನೋ ನ೦ಬಿಕೆ ನನಗಿದೆ (ಎಷ್ಟೇ ಆದರು ಪಾಪಿ ಚಿರಾಯು ಅಲ್ವ?).ಆದ್ರೆ ಹುಡುಗೀರು ಯಾರೂ ಉಳಿಯದಿದ್ರೆ ? ಮು೦ದೇನಾಗತ್ತೋ ಗೊತ್ತಿಲ್ಲ, ಆದರೆ ಕಾಣದ ಮನದನ್ನೆಯ ಬಗ್ಗೆ ಯೋಚಿಸುತ್ತಾ ಆಗಾಗ ಪ್ರೀತಿಯ ಮಧುರ ಕಲ್ಪನೆಗಳಲ್ಲಿ ಕಳೆದು ಹೋಗಿರೋದ೦ತೂ ಸತ್ಯ
Print Friendly and PDFPrintPrint Friendly and PDFPDF


For Further Reading,
ENTERTAINMENT

0 comments:

By Blog Gadgets

Choose Your Subject

2013 WALLPAPERS 7th Pay Commission AADHAR ACCOUNTS AIPEU AIR INDIA AIRF AIRTRAVEL ALLOWANCES AMAGING AMAZING ANNA HAZARE ANOMALY ANTI CORRUPTION MOVEMENT AUTISM BABIES BANKING BIRDS WALLPAPERS BLOGGING BONUS BSNL BUDGET Cadre Restructure Calenders CANCER CASUAL LABOURS CAT CAT Orders CBSE CCL CCS CCS PENSION CCS(JT) Rules 1979 CGHS CHARTS CHILD CARE Child Care Allowance CHILDREN EDUCATION ALLOWANCE CHINA CIRCULARS Compassionate Appointment CONSUMER NEWS Conveyance Allowance Court Orders CPWD CREATIVITY CRICKET. SPORTS WALLPAPERS CSD CSS CVC Cycle Maintenance Allowance DA DA MERGER DEFENCE DEFENSE DIGITAL INDIA DIGITAL LIFE CERTIFICATE DISABLED DOPT DOWNLOAD DPE DRDO eCards ECHS EDUCATION eMO EMPLOYEES NEWS EMPLOYMENT NEWS ENTERTAINMENT EPFO ESTATES EX SERVICEMEN EXAMINATIONS FACEBOOK FAQs FDI FESTIVALS FIGHT FOR JUSTICE FINANCE BILL 2013 FINMIN FLOWERS FORMs FUNNY PICTURES g GADGETS Ganesha Wallpapers GDS GENERAL KNOWLEDGE GENERAL KNOWLEDGE - CURRENT AFFAIRS GOD WALLPAPERS GPF GREETINGS Group B HBA HEALTH HIGH DEFINITION WALLPAPER HOLIDAYS Hostel Subsidy Allowance HRA IAS IBA IDA INCOME TAX INCREMENT INDEPENDENCE DAY INDEX NUMBERS INDIA INSURANCE INVESTMENT IP/ASP IPO Exam ISLAM JOINING TIME KIDS KVS LATEST POSTAL NEWS Latest Releases from PIB LEAVE LOKAYUKTA LOVE LTC MACPS MAKE IN INDIA MEDICAL Meghdoot Millennium MHA MOBILE BANKING MOBILE WALLPAPERS MOF MOTHER MY CORNER NATURE WALLPAPERS NEGATIVE LIST NEWS NPS One Rank One Pension ORDERS ORDINANCE PARLIAMENT NEWS PENSION People you must know PERSMIN PERSONALITY DEVELOPMENT PERSONOLITY DEVELOPMENT PFRDA POLITICS POSTAL TECHNOLOGY Postings PPF Promotions QUESTION PAPERS QUOTES RAILWAY NEWS RAJYASABHA NEWS RBI RECRUITMENT REIMBURSEMENT RELIGION REPUBLIC DAY RESERVATION RESULTS Retirement Age RTI SANATANA DHARMA Sanchaya Post SAPOST SBCO SC SCIENCE SCOVA SECULAR SEXUAL HARASSMENT SKIN CARE SLEEP SMS SMS-GOODNIGHT SPEEDNET ST Study Material TATKAL TEACHERS TECHNOLOGY TECHNOLOGY TIPS TERRORISM TRANSFER TRAVEL Travelling Allowance Troubleshooting Problems in Postal Applications UNION NEWS UPSC VIDEOS Virus Wallpapers Washing Allowance WILD PHOTOGRAPHY WOMAN ಕನ್ನಡಿಗ

Popular Posts of the Month

All Time Popular Posts

 
Blogger Wordpress Gadgets