ಎನ್ನ ಮನದನ್ನೆ - ೧
ಮರೆತು ಬಿಡುವುದು ಹೇಗೆ ಹೇಳು ನಿನ್ನ
ತಂಪೆರಚುವ ಸವಿ ನೆನಪ ಕುರುಹುಗಳ
ಆಗಾಗ ಬಂದು ಕಾಡುತಿಹ ಕನಸುಗಳ
ಕಾರ್ಮೋಡದ ಸುಳಿ ಮಿಂಚ ಕಂಡೆ ಆ ಕಂಗಳಲಿ
ನೀರ ಬಿಂದಿಗೆ ಪಿಡಿದು ಹೂಬನದ ಕಡೆ ನಡೆದಿಹ ನೀರೆ
ಹಿಂತಿರುಗಿ ನನ್ನೆಡೆಗೆ ನೋಡಿದಾ ಅರೆ ಕ್ಷಣದಿ
ಕಾದಿದ್ದೆ ನಾನಂದು ದೇವ ಗುಡಿ ಅಂಗಳದಿ
ಹೂವಬಟ್ಟಲ ಹಿಡಿದು ಬರುವೆಯೆಂದು
ದಿನ ಕಳೆದು ಸಂಜೆಯಾಯ್ತು ನಿನ್ನ ಸುಳಿವಿಲ್ಲ ಇನಿತು
ಇಂದಾದರೂ ನೀ ಬರುವೆ ಆಸೆಗೋಪುರವನೇ ಕಟ್ಟಿರುವೆ
ಬಂದೊಮ್ಮೆ ಎನ್ನೆದೆಯ ದೀಪವನು ಬೆಳಗಿಸೆಯಾ
ಕುಡಿನೋಟದಿ ಸನ್ನೆಯಲಿ ಸಮ್ಮತಿಯ ಸೂಚಿಸೆಯಾ?
```````````````````````````````````````````````````````
ಎನ್ನ ಮನದನ್ನೆ - ೨
ಎನ ನಲ್ಲೆಯ ಬಗ್ಗೆ ಏನೆಂದು ವಿವರಿಸಲಿ
ಸರಳ ಸುಂದರತೆಯ ಸಾಕಾರ ಇವಳು
ಒಲ್ಲದಿಹ ಮಾತಿಗೆ ಸನ್ನೆಯಲೇ ನಕಾರ
ಪ್ರೀತಿ ಬಯಸುತಿಹ ಜೀವಕೆ ಒಲವಿನಲಿ ಸಹಕಾರ
ತುಂಟ ಕುಡಿ ನೋಟದಲೇ ಸೆರೆ ಹಿಡಿವ ರತಿ ಇವಳು
ಬಳುಕು ನಡೆ ನೀಳ ಜಡೆಯ ಮನ ಕದ್ದ ಒಡತಿ
ಜತೆಗೂಡಿ ನನ್ನೊಡನೆ ಎಲೆಯಡಿಕೆ ಮೆಲ್ಲುತಲಿ
ಸುದ್ದಿ ಕಂತೆಯ ಮಹಾಪೂರವನೇ ಕರೆಯುವಳು
ಅವರಿವರ ಸುದ್ದಿ ನಮಗೇತಕೆ ಬಿಡಿ
ಕೊನೆಯಲ್ಲಿ ನನ್ನ ಬಾಯ್ಮುಚ್ಚಿಸುವಳೇ ಇವಳು!


For Further Reading,
0 comments:
Post a Comment